ಸಣ್ಣ ರೈತರು ನರೇಗಾ ಯೋಜನೆ ನೆರವು ಪಡೆದು ತಮ್ಮದೇ ಹೊಲ, ಗದ್ದೆ, ತೋಟ, ಕೊಟ್ಟಿಗೆ ಕೆಲಸ ಮಾಡಿಸಿಕೊಳ್ಳಬಹುದು. ಇದಕ್ಕಾಗಿ ಬರೋಬ್ಬರಿ 5 ಲಕ್ಷ ರೂಪಾಯಿ ವರೆಗೂ ನೆರವು ಸಿಗುತ್ತದೆ. ಈ ಸಹಾಯಧನ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS) ಗ್ರಾಮೀಣ ಪ್ರದೇಶಕ್ಕೆ ದೊಡ್ಡ ವರದಾನವಾಗಿದೆ. ಸಣ್ಣ ರೈತರಿಗೆ, ಕೂಲಿ ಕಾರ್ಮಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರಕಾರ ವೈಕ್ತಿಕ ಕಾಮಗಾರಿ ಮೊತ್ತವನ್ನು ಕೂಡ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.


ರೈತರಿಗೆ ಸಿಗಲಿದೆ ಭರ್ತಿ ₹5 ಲಕ್ಷ ನೆರವು

ಈ ಮೊದಲು ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಸಣ್ಣ, ಅತೀ ಸಣ್ಣ ರೈತರು, ಹೈನುಗಾರರು ಮತ್ತು ಆಡು-ಕುರಿ ಸಾಕಾಣಿಕೆದಾರರು ಗರಿಷ್ಟ 2.5 ಲಕ್ಷ ರೂಪಾಯಿ ಸಹಾಯಧನ ಪಡೆಯಲು ಅವಕಾಶವಿತ್ತು. ಇದೀಗ ಈ ಮೊತ್ತ ಡಬಲ್ ಆಗಿದ್ದು; ಬರೋಬ್ಬರಿ 5 ಲಕ್ಷ ರೂಪಾಯಿ ವರೆಗೂ ನೆರವು ಪಡೆದು ಹೊಲ, ಗದ್ದೆ, ತೋಟ, ಕೊಟ್ಟಿಗೆ ಕೆಲಸ ಮಾಡಿಸಿಕೊಳ್ಳಬಹುದು.

ಗ್ರಾಮೀಣ ಪ್ರದೇಶದಲ್ಲಿ ಅವರದೇ ಗ್ರಾಮದಲ್ಲಿ ಒಂದು ವರ್ಷಕ್ಕೆ ಕನಿಷ್ಠ 100 ದಿನಗಳ ಕಾಲ ಉದ್ಯೋಗ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಉದ್ಯೋಗ ಬಯಸುವ ಹಳ್ಳಿಯ ಪ್ರತಿ ಕುಟುಂಬಕ್ಕೆ ವರ್ಷದಲ್ಲಿ 100 ದಿನಗಳ (ಬರ ಪೀಡಿತ ಪ್ರದೇಶಗಳಲ್ಲಿ 150 ದಿನಗಳು) ಉದ್ಯೋಗ ಖಾತರಿ ನೀಡಲಾಗುತ್ತದೆ.


ಯಾರಿಗೆಲ್ಲ ಸಿಗಲಿದೆ ಈ ನೆರವು?

ಸಮುದಾಯ ಕಾಮಗಾರಿ ಮತ್ತು ವೈಯಕ್ತಿಕ ಕಾಮಗಾರಿಗಳನ್ನು ನಿರ್ಮಿಸಿಕೊಳ್ಳಲು ಈ ಕೆಳಕಂಡ ಫಲಾನುಭವಿಗಳಿಗೆ ನರೇಗಾ ಯೋಜನೆಯಡಿ ಲಕ್ಷಾಂತರ ರೂಪಾಯಿ ಸಹಾಯಧನ ನೀಡಲಾಗುತ್ತಿದೆ:

ಸಣ್ಣ ಮತ್ತು ಅತಿ ಸಣ್ಣ ರೈತರು
ಪರಿಶಿಷ್ಟ ಜಾತಿ/ಪಂಗಡ ಜಾತಿ
ಅಲೆಮಾರಿ ಬುಡಕಟ್ಟುಗಳು
ಅಧಿಸೂಚನೆಯಿಂದ ಕೈಬಿಟ್ಟ ಬುಡಕಟ್ಟುಗಳು
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು
ಮಹಿಳಾ ಪ್ರಧಾನ ಕುಟುಂಬಗಳು
ವಿಕಲಚೇತನ ಕುಟುಂಬಗಳು
ಭೂ ಸುಧಾರಣಾ ಫಲಾನುಭವಿಗಳು
ವಸತಿ ಯೋಜನೆಯ ಫಲಾನುಭವಿಗಳು
ಅರಣ್ಯ ಹಕ್ಕು ಕಾಯ್ದೆ 2006ರ ಫಲಾನುಭವಿಗಳು


ಯಾವ್ಯಾವ ಕಾಮಗಾರಿಗೆ ಸಹಾಯಧನ?

ರೈತರು ತಮ್ ಸ್ವಂತ ಜಮೀನುಗಳಲ್ಲಿ ಈ ಕೆಳಕಂಡ ಕಾರ್ಯ ಚಟುವಟಿಕೆಗಳಿಗೆ ನರೇಗಾ ಯೋಜನೆಯಡಿ ಸಹಾಯಧನ ಪಡೆಯಬಹುದಾಗಿದೆ:

ಜಮೀನುಗಳಲ್ಲಿ ಕೃಷಿ ಹೊಂಡ
ಬದು ನಿರ್ಮಾಣ
ತೆರೆದ ಬಾವಿ, ಕುರಿ/ಮೇಕೆ ಕೊಟ್ಟಿಗೆ
ಬಚ್ಚಲು ಗುಂಡಿ
ಮೀನು ಕೃಷಿ ಕೊಳ
ಕಂದಕ ಬದು ನಿರ್ಮಾಣ
ಕೊಳವೆ ಬಾವಿ ಮರುಪೂರಣ ಘಟಕ
ತೆರೆದ ಬಾವಿ
ಅಜೋಲಾ ಘಟಕ
ಎರೆಹುಳು ಗೊಬ್ಬರ ತೊಟ್ಟಿ
ಇಂಗು ಗುಂಡಿ ನಿರ್ಮಾಣ
ಕೃಷಿ ಅರಣ್ಯ
ತೋಟಗಾರಿಕೆ ಬೆಳೆಗಳು
ರೇಷ್ಮೆ ಕೃಷಿ
ಕೋಳಿ ಶೆಡ್, ಆಡು/ಕುರಿ ಶೆಡ್, ಹಂದಿ ಶೆಡ್

ರೈತರು ಕೇವಲ ಒಂದೇ ರೀತಿಯ ಬೆಳೆ ಬೆಳೆದು ನಷ್ಟ ಅನುಭವನಿಸುವ ಬದಲು, ನರೇಗಾದಡಿ ಧನಸಹಾಯ ಪಡೆದು ಮಿಶ್ರ ಬೆಳೆಗಳನ್ನು ಬೆಳೆಯಲು ಕೂಡ ಸಾಕಷ್ಟು ಅವಕಾಶವಿದೆ.


ಯಾವ ಕಾಮಗಾರಿಗೆ ಎಷ್ಟೆಷ್ಟು ಸಹಾಯಧನ?

ಕುರಿ/ಮೇಕೆ ಕೊಟ್ಟಿಗೆ : 70 ಸಾವಿರ ರೂಪಾಯಿ
ಬಚ್ಚಲು ಗುಂಡಿ : 14 ಸಾವಿರ ರೂಪಾಯಿ
ದನದ ಕೊಟ್ಟಿಗೆ (4 ದನಗಳಿಗೆ) : 57 ಸಾವಿರ ರೂಪಾಯಿ
ಕೋಳಿ ಶೇಡ್ : 62 ಸಾವಿರ ರೂಪಾಯಿ
ಮೀನು ಕೃಷಿ ಕೊಳ : 1 ಲಕ್ಷ ರೂಪಾಯಿ
ಕಂದಕ ಬದು ನಿರ್ಮಾಣ : 35 ಸಾವಿರ ರೂಪಾಯಿ
ಹಂದಿ ಕೊಟ್ಟಿಗೆ ನಿರ್ಮಾಣ : 87 ಸಾವಿರ ರೂಪಾಯಿ
ಕೊಳವೆ ಬಾವಿ ಮರುಪೂರಣ ಘಟಕ : 27 ಸಾವಿರ ರೂಪಾಯಿ
ಎರೆಹುಳು ಘಟಕ : 27 ಸಾವಿರ ರೂಪಾಯಿ
ತೆರೆದ ಬಾವಿ : 1.50 ಲಕ್ಷ ರೂಪಾಯಿ
ಅಜೋಲಾ ಘಟಕ : 17 ಸಾವಿರ ರೂಪಾಯಿ
ಕೃಷಿ ಹೊಂಡ : 77 ಸಾವಿರ ರೂಪಾಯಿ
ಪೌಷ್ಟಿಕಾಂಶ ಕೈತೋಟ : ಸೀಬೆ, ಕರಿಬೇವು, ನೆಲ್ಲಿ, ನುಗ್ಗೆ, ಸಪೋಟ, ತೆಂಗು ಮತ್ತು ನಿಂಬೆ ಗಿಡಗಳನ್ನು ನಿಮ್ಮ ಕೈತೋಟದಲ್ಲಿ ನೆಟ್ಟರೆ ರೂ. 2,397/- ಗಳನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.


ನರೇಗಾ ನೆರವು ಪಡೆಯುವುದು ಹೇಗೆ?

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಈ ಎಲ್ಲ ಸಹಾಯಧನ ಪಡೆಯಲು ಮುಖ್ಯವಾಗಿ ರೈತರು ಉದ್ಯೋಗ ಚೀಟಿ ಅಥವಾ ಜಾಬ್ ಕಾರ್ಡ್ ಹೊಂದಿರಬೇಕು. ಸ್ಥಳೀಯ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಕುಟುಂಬ ಸದಸ್ಯರ ಸೂಕ್ತ ದಾಖಲೆಗಳನ್ನು ಒದಗಿಸುವ ಮೂಲಕ ಜಾಬ್ ಕಾರ್ಡ್ ಪಡೆಯಬಹುದು.

ಜಾಬ್ ಕಾರ್ಡ್ ಪಡೆದ ನಂತರ ಉದ್ಯೋಗಕ್ಕಾಗಿ ನಮೂನೆ-6ರಲ್ಲಿ ಗ್ರಾಮ ಪಂಚಾಯ್ತಿಗೆ ಬೇಡಿಕೆ ಸಲ್ಲಿಸಿ, ಸ್ವೀಕೃತಿ ಪಡೆಬೇಕು ಅಥವಾ ಮನೆಯಲ್ಲಿಯೇ ಕುಳಿತು ಕಾಯಕ ಮಿತ್ರಮೊಬೈಲ್ ಅಪ್ ಮೂಲಕವೂ ಅರ್ಜಿ ಸಲ್ಲಿಸಬಹುದು.

ನರೇಗಾ ವೈಯಕ್ತಿಕ ಕಾಮಗಾರಿಗಳು ಕುರಿತ ಸರ್ಕಾದ ಆದೇಶ ಪ್ರತಿ : Download

Posted By: Riya News Portal
Copyright © Riya News Portal 2024